Wednesday, January 15, 2014

ಮೈಸೂರಿನಲ್ಲಿ ಆಕಾಶವಾಣಿ ಕೃಷಿ ಸಾಧನಾ ಸಮಾವೇಶ ನಡೆಯಿತು . ೩೧-೧-೧೧ರಂದು ನಡೆದ ಕಾರ್ಯಕ್ರಮದಲ್ಲಿ ಬಾನುಲಿ ಕೃಷಿಕರ ಕಂಪನಿ ಸಹ ಉದ್ಘಾಟನೆ ಆಯಿತು . ಶಿವಣ್ಣ ಗೌಡ ದಂಪತಿ ಗಳಿಗೆ ಬಾನುಲಿ ಕೃಷಿ ರತ್ನ ಪ್ರಶಸ್ತಿ ಸಹ ನೀಡಲಾಯಿತು . 

Friday, January 28, 2011


ಕನ್ನಡ ಪ್ರಭ ಪತ್ರಿಕೆ ಯಲ್ಲಿ ಶ್ರೀ. ಅಂಶಿ ಪ್ರಸನ್ನ ಕುಮಾರ್ ವರದಿ
ಮೈಸೂರಿನಲ್ಲೊಬ್ಬ ಸಾವವಯ ಕೃಷಿಕ
ಅರಣ್ಯಾಧರಿತ ತೋಟ ಮಾಡಿ ಗೆದ್ದಓದಿದ್ದು ಎಂಎಸ್ಸಿ, ಬಯಸಿದ್ದು ಐಎಫ್ಎಸ್
ಆಗಿದ್ದು `ಮಾಸ್ಟರ್' ಆಫ್ ಕೃಷಿ !


ಕೃಷಿ ಅಂದ್ರೆ ಏನು ? - ಅದೊಂದು ದೇಶದ ಬೆನ್ನೆಲುಬು, ಅನ್ನ ಸೃಷ್ಟಿಸುವ ಮಹಾನ್ ಕಾಯಕ, ಮೇಟಿ ವಿದ್ಯೆ, ಸಂಸ್ಕೃತಿ, ಜೀವನ ಪದ್ಧತಿ... ಹೀಗೆ ಸೂರ್ಯನ ನೆತ್ತಿಯ ಕೆಳಗಿನ ಸರ್ವಸ್ವವನ್ನು ಕೃಷಿಯೊಂದಿಗೆ ಜೋಡಿಸಿ ವ್ಯಾಖ್ಯಾನಿಸಬಹುದು.
ಇದೇ ಪ್ರಶ್ನೆಯನ್ನು ಜಿ.ಬಿ. ಸರಗೂರಿನ ಕೆ. ವೆಂಕಟೇಶ್ ಎಂಬ ಯುವ ಕೃಷಿಕನ ಮುಂದಿಟ್ಟರೆ, ಅದೊಂದು ಖುಷಿ ನೀಡುವ ಕಲೆ, ಅಷ್ಟು ಮಾತ್ರವಲ್ಲ. ಪರಿಶ್ರಮದಿಂದ ಮಾಡಿದರೆ, ಲಾಭದಾಯಕ ವ್ಯವಹಾರ. ಯಂತ್ರೋಪಕರಣ ಬಳಕೆ, ಸಾವಯವ ಪದ್ಧತಿ ಹಾಗೂ ಅರಣ್ಯ ಆಧಾರಿತ ವಾಗಿ(ಒಂದು ಪ್ರಯೋಗ) ದುಡಿಸಿಕೊಂಡರೆ, ಅದೊಂದು ಲಾಭದಾಯಕ ಪ್ರೈವೇಟ್ ಲಿಮಿಟೆಡ್ ಕಂಪನಿ ಮಾದರಿಯ ವ್ಯವಹಾರ ಎಂದು ಅಚ್ಚರಿ ಮೂಡಿಸುತ್ತಾರೆ !
ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲೂಕಿನ ಜಿ. ಬಿ. ಸರಗೂರಿನಲ್ಲಿ, ವೆಂಕಟೇಶ್ ಅವರೇ ಅಭಿವೃದ್ಧಿ ಪಡಿಸಿರುವ 25 ಎಕರೆ ವಿಶಾಲ ತೋಟದಲ್ಲಿ ನಿಂತು, ಕೃಷಿಯನ್ನು ಕಂಪನಿ ವ್ಯವಹಾರಕ್ಕೆ ಹೋಲಿಸಿ ಮಾತನಾಡುತ್ತಿದ್ದರೆ, ಅವರ ಮಾತಿನ ಮೇಲೆ ವಿಶ್ವಾಸ ಮೂಡುತ್ತದೆ. ಏಕೆಂದರೆ, ಅವರ ಮಾತಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ತೋಟವೇ ಅಲ್ಲಿ ಅರಳಿ ನಿಂತಿದೆ.
ಅಂದಹಾಗೆ ಇದು-ಸಾವಯವ ಕೃಷಿಕನೊಬ್ಬನ ಯಶೋಗಾಥೆ. ಮೈಸೂರು ವಿಶ್ವವಿದ್ಯಾನಿಲಯಲ್ಲಿ ಎಂಎಸ್ಸಿ ಕಲಿತು, ವನ್ಯಜೀವಿಗಳ ಕುರಿತು ಸಂಶೋಧನೆಗಿಳಿದು, ಕೆಲ ಕಾಲ ಐಎಫ್ಎಸ್ ಅಧಿಕಾರಿ ಆಗಬೇಕೆಂದು ಸ್ಪರ್ದಾತ್ಮಕ ಪರೀಕ್ಷೆ ಬರೆದು, ಕಟ್ಟಕಡೆಗೆ ಕೃಷಿ ಕಡೆ ಹೊರಳಿ ನಿಂತಿರುವ 37 ವರ್ಷದ ಕೆ. ವೆಂಕಟೇಶ್ ಇಲ್ಲಿನ ಕಥಾನಾಯಕ.
ಐದು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಜಮೀನು ಖರೀದಿಸಿ, ಸಾವಯವ ಪದ್ಧತಿಯಡಿ, ಅರಣ್ಯಾಧಾರಿತ ಕೃಷಿ ಮಾಡಲು ನಿಂತಾಗ, ವೆಂಕಟೇಶ್ ಅವರನ್ನು ಸುತ್ತಮುತ್ತಲಿನ ರೈತರು ಹುಚ್ಚಪ್ಪ ಅಂದ್ರು ! ಆದರೆ, ಈ ಹುಚ್ಚು ಕನಸುಗಳೇ ಒಂದೊಂದಾಗಿ ನನಸಾಗಲಾರಂಭಿಸಿದಾಗ, ಅದೇ ವೆಂಕಟೇಶ್ ಕೃಷಿಯ ಮಾಸ್ಟರ್ ಆದ್ರು.
ಮೈಸೂರಿನಿಂದ ಸುಮಾರು 20 ಕಿ. ಮೀ. ದೂರದಲ್ಲಿ ವೆಂಕಟೇಶ್ ತೋಟವಿದೆ. ಅಡಿಕೆ, ತೆಂಗು, ಬಾಳೆ, ಪರಂಗಿಯಂಥ ತೋಟಗಾರಿಕೆ ಬೆಳೆಗಳು, ಭತ್ತ, ಗೋಧಿ, ಎಳ್ಳು, ಮೆಕ್ಕೆಜೋಳ, ರಾಗಿಯಂಥ ಧವಸ-ಧಾನ್ಯಗಳು, ಹುಣಸೆ, ಬೆಟ್ಟದ ನಲ್ಲಿ, ಬೆಲ್ಲದ ಮರ, ಸೀತಾಫಲ, ರಾಮಫಲ, ಸೀಬೆ, ಕಿರುನೆಲ್ಲಿ, ಬೇವು, ಶ್ರೀಗಂಧ ಸೇರಿದಂರೆ ನಾನಾ ಜಾತಿಯ ಮರಗಳಿಂದ ಸಮೃದ್ಧವಾಗಿರುವ ಈ ತೋಟ- ಅರಣ್ಯ ಆಧಾರಿತ ಕೃಷಿಯ ಒಂದು ಮಾದರಿ. ಸಾವಯವ ಪದ್ಧತಿಯಲ್ಲಿಯೇ ತೋಟ ಅರಳಿ ನಿಂತಿರುವುದರಿಂದ, ಇಲ್ಲಿ ಹಸು, ಕೋಳಿ, ನಾಯಿಯಂಥ ದೇಸಿ ಜಾತಿಯ ಸಾಕು ಪ್ರಾಣಿಗಳಿವೆ. ತೋಟಕ್ಕೆ ಕಾಡಿನ ನಂಟಿರುವುದರಿಂದ, ಇಲ್ಲಿ ನಿತ್ಯವೂ ನೂರಾರು ಜಾತಿಯ ಪಕ್ಷಿಗಳ ಕಲರವ ಕೇಳಬಹುದು. ಕೂಲಿ ಸಮಸ್ಯೆ ಇರುವುದರಿಂದ, ವೆಂಕಟೇಶ್ಗೆ ಕೃಷಿ ಯಂತ್ರೋಪಕರಣಗಳೇ ಆಳು-ಕಾಳು, ಎತ್ತು-ಜಾನುವಾರು. ಪ್ರಯೋಗ ಶೀಲತೆಗೆ ಒತ್ತು ನೀಡಿರುವುದರಿಂದ ಜೇನು ಕೃಷಿಗೂ ತೋಟ ಆಸರೆ ನೀಡಿದೆ. ಎರಡೇ ಎರಡು ಬೋರ್ವೆಲ್ಗಳಿಂದ ಚಿಮ್ಮುವ ನೀರನ್ನು ಹನಿ-ಹನಿಯಾಗಿ ಬಳಸಿಕೊಂಡು, ಹನಿಗಾರಿಕೆಯ ಮಹತ್ವವನ್ನೂ ತೋಟ ಸಾರುತ್ತಿದೆ. ಹಾಗಾಗಿ ಇದೊಂದು ಸಮಗ್ರ ತೋಟವೂ ಹೌದು !
ಸಾವಯವ ದ್ರಾವಣ -ಗ್ಲುಕೋಸ್
ಕೃಷಿಯನ್ನು ಲಾಭದಾಯಕ ಮಾಡಬೇಕೆಂಬ ಬಯಕೆ ಇಟ್ಟುಕೊಂಡೇ ಕೃಷಿಗೆ ಇಳಿದ ವೆಂಕಟೇಶ್, ಆರಂಭದಲ್ಲಿಯೇ ರಾಸಾಯನಿಕ ಗೊಬ್ಬರದ ಸೋಂಕಿಲ್ಲದ ಸಾವಯವ ಕೃಷಿಗೆ ಶರಣೆಂದರು. ತಿಪ್ಪೇಗೊಬ್ಬರವನ್ನೂ ಅತಿಯಾಗಿ ಬಳಸುವುದು ಬೇಡ ಅನಿಸಿತು. ಹಾಗಾಗಿ ಕೊಟ್ಟಿಗೆ ಗೊಬ್ಬರಕ್ಕಾಗಿ ಎರಡೇ ಎರಡು ಹಸುಗಳನ್ನು ಮಾತ್ರ ಹೊಲದಲ್ಲಿ ತಂದು ಕಟ್ಟಿಕೊಂಡಿದ್ದಾರೆ. ಪ್ಲಾಸ್ಟಿಕ್ ಮತ್ತು ಗ್ಲಾಸ್ ಹೊರತು ಪಡಿಸಿ ತೋಟದಲ್ಲಿ ಉತ್ಪಾದನೆಯಾಗುವ ಕಳೆ, ತರಗು-ತ್ಯಾಜ್ಯ, ಹಸಿರು ಸೊಪ್ಪು-ಸೆದೆಯನ್ನೇ ವ್ಯವಸ್ಥಿತವಾಗಿ ಕೊಳಸಿ, ಅದರಲ್ಲಿಯೇ ರಸ ತೆಗೆಯುವ ವಿಧಾನ ಅಳವಡಿಸಿಕೊಂಡಿದ್ದಾರೆ. ಈ ಅರ್ಥದಲ್ಲಿ ತೋಟ ಭಾಗಷಃ ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿರುವ ಪದ್ಧತಿಯೂ ಹೌದು.
ತೋಟದಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸೆಗಣಯೊಂದಿಗೆ ಕೊಳೆಸಿ, ಅದರಿಂದಲೇ ದ್ರವರೂಪದ ಕೊಟ್ಟಿಗೆ ರಸವನ್ನು ತೆಗೆಯುವ `ಅಮೂಲ್ಯಸಾರ ತಯಾರಿಕೆ ಮತ್ತು ಸಂಗ್ರಹಣೆ' ವಿಧಾನವನ್ನು ತೋಟದಲ್ಲಿ ಪರಿಚಯಿಸಲಾಗಿದೆ. ಈ ಮಾದರಿಯಲ್ಲಿ ಹೆಚ್ಚು ಸೆಗಣಿಯ ವಾಸನೆ ಇಲ್ಲ. ಎರೆಹುಳು ತಯಾರಿಕೆಗೂ ಇಲ್ಲಿ ಅವಕಾಶವಿದೆ.
ಅರಣ್ಯ ಆಧಾರಿತ ಕೃಷಿ
ಸುತ್ತಮುತ್ತಲಿನ ಪರಿಸರ ಸಮತೋಲದಿಂದ ಕೂಡಿರಬೇಕು ಎಂಬ ಉದ್ದೇಶದಿಂದ ತೋಟದ ಒಂದು ಭಾಗದಲ್ಲಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ಏನನ್ನೂ ಬೆಳೆದಿಲ್ಲ. ಹಾಗಾಗಿ ಅಲ್ಲಿ ಕಾಡು ಬೆಳೆದು ನಿಂತಿದೆ. ಬೇವು, ಶ್ರೀಗಂಧ, ರಾಮಫಲ, ಸೀಬೆ ಸೇರಿದಂತೆ ಹತ್ತಾರು ಜಾತಿಯ ಹಣ್ಣಿನ ಮರಗಿಡಗಳು ನೈಸಗರ್ಿಕವಾಗಿ ಬೆಳೆದಿವೆ. ಆ ಪ್ರದೇಶದಲ್ಲಿಯೇ ಕೃತಕವಾಗಿ ಎರಡು ಜರಿಗಳನ್ನು ನಿರ್ಮಿಸಿದ್ದಾರೆ . ಹಾಗಾಗಿ ತೋಟದಲ್ಲಿ 80 ಜಾತಿಯ ಪಕ್ಷಿಗಳಿವೆ. ಕೃಷಿಗೆ ಕೂಲಿಕಾರ್ಮಿಕರ ಕೊರತೆ ಇರುವುದರಿಂದ, ವೆಂಕಟೇಶ್ ಯಂತ್ರೋಪಕರಣಗಳ ಮೊರೆ ಹೋಗಿದ್ದಾರೆ. ಕಳೆ ಕೀಳಲು, ಗುಂಡಿ ಹೊಡೆಯಲು, ಅಡಿಕೆ ಕೀಳಲು- ಎಲ್ಲದಕ್ಕೂ ಯಂತ್ರಗಳು. ಇದರಿಂದ ಹಣ ಹಾಗೂ ಶ್ರಮ- ಎರಡೂ ಉಳಿತಾಯವಾಗುತ್ತದೆ ಎನ್ನುತ್ತಾರೆ ವೆಂಕಟೇಶ್.
ಅಂದಹಾಗೆ ಈ ತೋಟವನ್ನು ಖರೀದಿ ಮಾಡಿರುವುದು ವೆಂಕಟೇಶ್ ಸ್ನೇಹಿತರಾದ ಚಂದ್ರಶೇಖರ್ ದಂಪತಿ. ವೆಂಕಟೇಶ್ ಇಲ್ಲಿ ತಮ್ಮ ಬುದ್ಧಿ-ಕೌಶಲವನ್ನು ಬಂಡವಾಳವಾಗಿ ಹೂಡಿದ್ದಾರಷ್ಟೆ. ಹಾಗಾಗೀ ಇಬ್ಬರು ಇದರ ಪಾಲುದಾರರು. ಉಳುವವನೂ ಇಲ್ಲಿ ಭೂ ಒಡೆಯ. ಕಂಪನಿಯ ನೀತಿ, ಸಹಕಾರಿ ತತ್ತ್ವವೂ ಇದೇ !ವೆಂಕಟೇಶ್ ಮೊಬೈಲ್ ನಂಬರ್ 9945290334
- ಚೀ. ಜ. ರಾಜೀವ

ಮೈಸೂರು ಆಕಾಶವಾಣಿ :
ರಾಜ್ಯಮಟ್ಟದ ಕೃಷಿ ಸಾಧನಾ ಸಮಾವೇಶ
- ಆಕಾಶವಾಣಿ ಮೈಸೂರು ತನ್ನ ಅಮೃತ ಮಹೋತ್ಸವ ವರ್ಷ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿರುವ ರಾಜ್ಯ ಮಟ್ಟದ ಮೈಸೂರು ಆಕಾಶವಾಣಿ ಕೃಷಿ ಸಾಧನಾ ಸಮಾವೇಶ ವನ್ನು ಜನವರಿ 31, 2011ರಂದು ಸಂಜೆ 5 ಗಂಟೆಗೆ ಮೈಸೂರಿನ ಜಯಲಕ್ಷ್ಮಿಪುರಂನ ಮಹಾಜನ ಕಾಲೇಜು ಆವರಣದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಏರ್ಪಡಿಸಿದೆ.
ಜಿಲ್ಲಾಧಿಕಾರಿ ಶ್ರೀ ಹರ್ಷಗುಪ್ತ ಕಾರ್ಯಕ್ರಮ ಉದ್ಘಾಟಿಸುವರು. ಕೃಷಿವಾಣಿ: ನುಡಿಸಂಚಿಕೆಯನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಸಾವಯವ ಕೃಷಿ ಮಿಷನ್ನ ಅಧ್ಯಕ್ಷ ಡಾ: ಆನಂದ್ ಲೋಕಾರ್ಪಣೆ ಮಾಡುವರು. ಶ್ರೀ ವಾಲ್ಮೀಕಿ ಶ್ರೀನಿವಾಸ ಅಯ್ಯಂಗಾರ್ಯ ಅವರು ವೇದಕೃಷಿ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಜೈವಿಕ ಇಂಧನ ಕಾರ್ಯಪಡೆ ಅಧ್ಯಕ್ಷ ಶ್ರೀ ವೈ.ಬಿ. ರಾಮಕೃಷ್ಣ ಅವರು ಬಾನುಲಿ ಕೃಷಿಕರ ಕಂಪನಿ (ಪ್ರೈ) ಲಿಮಿಟೆಡ್ನ್ನು ಸಮರ್ಪಿಸುವರು . ಬಾನುಲಿ ಕೃಷಿ ಬೆಳಗು ಅಭಿನಂದನಾ ಪತ್ರವನ್ನು ಬೆಂಗಳೂರು ಆಕಾಶವಾಣಿ ನಿಲಯ ನಿರ್ದೇಶಕ ಡಾ: ಚೇತನ್ ಎಸ್. ನಾಯಕ್ ವಿತರಿಸುವರು. ಮೈಸೂರು ಆಕಾಶವಾಣಿ ನಿಲಯ ನಿರ್ದೇಶಕ ಡಾ: ಎಂ.ಎಸ್. ವಿಜಯಾ ಹರನ್ ಬಾನುಲಿ ಕೃಷಿ ರತ್ನ ಪ್ರಶಸ್ತಿ ಪ್ರದಾನ ಮಾಡುವರು.

ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆ
ಬಾನುಲಿ ಕೃಷಿಕರ ಕಂಪನಿ
ಬಾನುಲಿ ಕೃಷಿಕರ ಕಂಪನಿ (ಪ್ರೈ) ಲಿ. - ವಿಚಿತ್ರ ಆದರೂ ಸತ್ಯ ಅನ್ನುವಂತಿದೆ ಈ ಹೆಸರು. ನಮಗೆ ಪರಿಚಿತರಾಗಿರುವ ಹಲವು ಬಗೆಯ ರೈತರಿದ್ದಾರೆ. ಸಾವಯವ ಕೃಷಿಕರು, ನೈಸರ್ಗಿಕ ಕೃಷಿಕರು, ಪ್ರಗತಿಪರ ಕೃಷಿಕರು, ಮೀನು ಕೃಷಿಕರು, ತೆಂಗು ಕೃಷಿಕರು. . . . ಹೀಗೆ ಕೃಷಿಕರು ತಾವು ತೊಡಗಿಸಿಕೊಂಡಿರುವ ಅಥವಾ ಪರಿಣತಿ ಸಾಧಿಸಿರುವ ಕ್ಷೇತ್ರಕ್ಕೆ ಸಂಬಂಧಿಸಿದ ವಿಶೇಷಣವನ್ನು ಬಳಸುವುದು ಅಥವಾ ಅಂತಹ ರೈತರನ್ನು ಈ ರೀತಿ ವಿಶಿಷ್ಠವಾಗಿ ಗುರುತಿಸುವುದು ರೂಢಿಯಲ್ಲಿದೆ.
ಆದರೆ ಈ ಬಾನುಲಿ ಕೃಷಿಕ ಅನ್ನುವುದು ವಿಚಿತ್ರವಾಗಿದೆ. ಆದರೂ ಈ ಪದ ಬಳಕೆ ಚಾಲ್ತಿಗೆ ಬಂದಿದೆ ಎಷ್ಟೆಂದರೆ ಅದರ ಹೆಸರಿನಲ್ಲಿ ರೈತರ ಕೂಟವೊಂದು ಕಂಪನಿ ಸ್ಥಾಪಿಸಿ ಲಾಭದಾಯಕ ವ್ಯಾಪಾರ ಮಾಡುತ್ತೇನೆ ಎನ್ನುವ ಆತ್ಮವಿಶ್ವಾಸ ಮೂಡುವ ಮಟ್ಟಿಗೆ.
ಬಾನುಲಿ ಕೃಷಿಕ - ಕನ್ನಡದ ಪದಕೋಶ ಸೇರಿದ್ದು ನಾಲ್ಕು ವರ್ಷಗಳ ಹಿಂದೆ ಬಾನುಲಿ ಕೃಷಿಕರ ಬಳಗದ ಮೂಲಕ. ಈ ಪದದ ಸೃಷ್ಠಿಕರ್ತ ಮೈಸೂರು ಆಕಾಶವಾಣಿ. ಕರ್ನಾಟಕ ಸಂಗೀತಕ್ಕೆ ಹೆಸರುವಾಸಿಯಾದ ಮೈಸೂರು ಆಕಾಶವಾಣಿಯನ್ನು ಕೃಷಿ ವಿಚಾರದಲ್ಲಿಯೂ ಜನಪ್ರಿಯಗೊಳಿಸಿರುವುದು ಅದರ ಕೃಷಿರಂಗ ವಿಭಾಗ. ಅದಕ್ಕೆ ಸಾಕ್ಷಿಯಾಗಿರುವುದು ಬಾನುಲಿ ಕೃಷಿಕರ ಬಳಗ ಹಾಗೂ ಅದರ ಮುಂದುವರಿದ ಆವೃತ್ತಿ ಬಾನುಲಿ ಕೃಷಿಕರ ಕಂಪನಿ.
ಯಾವುದೇ ಸಂಸ್ಥೆಯೊಂದರ ಹೆಸರಿನಲ್ಲಿ ಕೃಷಿಕನನ್ನು ಗುರುತಿಸುವುದು ಪ್ರಾಯಶಃ ಇದೇ ಮೊದಲು. ಕೃಷಿ ವಿಷಯಗಳನ್ನು ಪ್ರಸಾರ ಮಾಡುವ ಇತರೆ ಆಕಾಶವಾಣಿ / ದೂರದರ್ಶನ ಕೇಂದ್ರಗಳಿವೆ. ಕೃಷಿ ವಿಷಯ ಪ್ರಕಟಿಸುವ ಹಲವು ಜನಪ್ರಿಯ ಪತ್ರಿಕೆಗಳಿವೆ. ಕೃಷಿಗೆಂದೇ ಮೀಸಲಾದ ಪತ್ರಿಕೆಗಳೂ ಇವೆ. ಆದಾಗ್ಯೂ ಅದರ ಕೇಳುಗರೋ, ವೀಕ್ಷಕರೋ, ಓದುಗರೋ, ಬಳಗವೊಂದನ್ನು ರೂಪಿಸಿಕೊಂಡು ಸಕ್ರಿಯವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಕೃಷಿ ವಿಷಯಗಳನ್ನು ಚರ್ಚಿಸುತ್ತ ಅರ್ಥಪೂರ್ಣ ಸಂವಾದದಲ್ಲಿ ತೊಡಗಿಸಿಕೊಂಡಿರುವುದು ವಿರಳ. ಇಂತಹ ವಿರಳಾತಿವಿರಳ ಕಾಯಕವನ್ನು ಆಗುಮಾಡಿರುವ ಮೈಸೂರು ಆಕಾಶವಾಣಿ ಅಭಿನಂದನಾರ್ಹವಾಗಿದೆ. ಈ ದಿಸೆಯಲ್ಲಿ ಮಾರ್ಗಪ್ರವರ್ತಕವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಕೃಷಿ ಕಾರ್ಯಕ್ರಮಗಳನ್ನು ರೈತರಿಗೆ ಪರಿಣಾಮಕಾರಿಯಾಗಿ ತಲುಪಿಸುತ್ತಿರುವ ಮಾಧ್ಯಮ ಎಂದರೆ ಆಕಾಶವಾಣಿ ಎಂಬುದನ್ನು ಮನಗಂಡ ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯ 2001ರಲ್ಲಿ ಆಕಾಶವಾಣಿಯ ಹಲವು ಕೇಂದ್ರಗಳಿಗೆ ಕೃಷಿ ಪ್ರಸಾರಕ್ಕಾಗಿಯೇ ವಿಶೇಷ ಧನಸಹಾಯ ನೀಡಿತು. ಕಿಸಾನ್ವಾಣಿ - ಕೃಷಿರಂಗ ಹೆಸರಿನಲ್ಲಿ ಆರಂಭವಾದ ಕೃಷಿ ಕಾರ್ಯಕ್ರಮಗಳು ರೈತರು ಸುಸ್ಥಿರ ಕೃಷಿಯತ್ತ ದೃಢಹೆಜ್ಜೆಗಳನ್ನು ಇಡಲು ಪ್ರೇರೇಪಣೆ ನೀಡಿದವು.
ಮೈಸೂರು ಆಕಾಶವಾಣಿ ಕೇಂದ್ರ ಇತರೆ ಆಕಾಶವಾಣಿಗಳಿಗಿಂತ ಭಿನ್ನ ಹೆಜ್ಜೆ ತುಳಿದದ್ದೇ ಈ ಹಂತದಲ್ಲಿ. ಇದು ಒಂದು ಹೆಜ್ಜೆ ಮುಂದೆ ಹೋಗಿ ತಾನು ಪ್ರಸಾರ ಮಾಡಿದ ಕೃಷಿ ಕಾರ್ಯಕ್ರಮಗಳ ಪರಿಣಾಮಗಳನ್ನು, ಉಪಯುಕ್ತತೆಯನ್ನು ಅರಿಯುವ ಪ್ರಯತ್ನ ಮಾಡಿತು. ರೇಡಿಯೋ ಕೇಂದ್ರದಿಂದ ಹೊರನಡೆದು ರೈತರ ಹೊಲಗದ್ದೆ ತೋಟಗಳಲ್ಲಿ ಅಡ್ಡಾಡಲು ಆರಂಭಿಸಿತು.
ಕೃಷಿ ವಿಶ್ವವಿದ್ಯಾನಿಲಯ, ಕೃಷಿ ಸಂಶೋಧನಾ ಕೇಂದ್ರಗಳಂತೆ ಕ್ಷೇತ್ರ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ರೈತರಿಗೆ ಮುಖಾಮುಖಿಯಾಗಿ ದ್ವಿಮುಖ ಸಂವಹನ ಆರಂಭಿಸಿತು. ದಿನನಿತ್ಯ ಕೃಷಿ ಕಾರ್ಯಕ್ರಮ ಆಲಿಸುತ್ತಿದ್ದ ರೈತರು, ಪ್ರತಿ ತಿಂಗಳು ಒಂದೆಡೆ ರೈತರ ಜಮೀನಿನಲ್ಲಿಯೇ ಸಭೆ ಸೇರಿ ಕೃಷಿ ವಿಷಯಗಳನ್ನು ಚರ್ಚಿಸುವ ಪರಿಪಾಠ ಆರಂಭವಾಯಿತು. ಇತಂಹ ಸಭೆಗಳಲ್ಲಿ ಕೃಷಿ ತಜ್ಞರು ಹಾಗೂ ಪೂರಕ ಕಸಬುಗಳಿಗೆ ಸಂಬಂಧಿಸಿದ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಇತರೆ ಇಲಾಖೆಗಳ ಸಹಯೋಗವನ್ನು ಪಡೆದುಕೊಳ್ಳಲಾಯಿತು. ಬಾನುಲಿ ಕೃಷಿ ಬೆಳಗು ಎಂಬ ಹೆಸರಿನಲ್ಲಿ ಪ್ರತಿ ತಿಂಗಳು ಕಾರ್ಯಕ್ರಮ ಆಯೋಜನೆಯಾದವು.
ಕಾರ್ಯಕ್ರಮದ ಉಪಯುಕ್ತತೆ ಮನಗಂಡ ರಾಜ್ಯ ವಾರ್ತಾ ಇಲಾಖೆಯು ಬಾನುಲಿ ಕೃಷಿ ಬೆಳಗು ಕಾರ್ಯಕ್ರಮಕ್ಕೆ ಎರಡು ವರ್ಷಗಳಿಗೆ ಪ್ರಾಯೋಜನೆ ನೀಡಿದೆ.
ನಿಯಮಿತವಾಗಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ರೈತರು ಬಾನುಲಿ ಕೃಷಿ ಬಳಗ ಸ್ಥಾಪಿಸಿಕೊಂಡು, ಅತ್ಯುತ್ತಮ ರೈತರಿಗೆ ಬಾನುಲಿ ಕೃಷಿ ಪ್ರಶಸ್ತಿ ಯನ್ನು ನೀಡುವ ಪರಿಪಾಠ ಆರಂಭಿಸಿದರು. ಈ ಎಲ್ಲ ಚಟುವಟಿಕೆಗಳನ್ನು ದಾಖಲಿಸಲು ನೇಗಿಲಯೋಗಿ ಎಂಬ ವಾರ್ತಾ ಪತ್ರವನ್ನು ಆರಂಭಿಸಲಾಯಿತು. ರೈತರ ಯಶೋಗಾಥೆಗಳನ್ನು ಪ್ರಕಟಿಸಲಾಯಿತಲ್ಲದೆ ಬಾನುಲಿ ಕೃಷಿ ಬೆಳಗು ನಡೆದು ಬಂದ ದಾರಿಯನ್ನು ದಾಖಲಿಸಲಾಯಿತು. ಹಲವು ರೈತರೇ ಈ ಪತ್ರಿಕೆಗೆ ಲೇಖನ ಬರೆದು ತಮ್ಮ ಸ್ವಾನುಭವ ವಿವರಿಸಿದರು. ನೇಗಿಲಯೋಗಿಯ ವ್ಯಾಪ್ತಿ ವಿಸ್ತರಿಸಲು ನೇಗಿಲಯೋಗಿ ಬ್ಲಾಗ್ ಸಹ ಆರಂಭಿಸಿ ಇನ್ನೊಂದು ಹೆಜ್ಜೆ ಮುಂದಿರಿಸಿತು.
ಇದೀಗ ಈ ಬಳಗ ಬಾನುಲಿ ಕೃಷಿಕರ ಕಂಪನಿ ಸ್ಥಾಪಿಸುತ್ತಿದೆ. ನೋಂದಣಿ ಪ್ರಕ್ರಿಯೆ ಮುಗಿದಿದ್ದು, ಜನವರಿ 31ರಂದು ಕಂಪನಿಯ ಉದ್ಘಾಟನೆಯೂ ಆಗಲಿದೆ. ರೈತರಿಂದ ಶೇರು ಸಂಗ್ರಹಿಸಿ, ರೈತರ ಉತ್ಪನ್ನಗಳ ಮೌಲ್ಯವರ್ಧನೆಯಾಗುವ ರೀತಿಯಲ್ಲಿ ಕೃಷಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಯೋಜಿಸಿದೆ. ಜೈವಿಕ ಇಂಧನ ತಯಾರಿಸುವ ಮಹತ್ವಾಕಾಂಕ್ಷೆ ಹೊಂದಿದೆ.
ಹಲವು ಸ್ವಾವಲಂಬಿ ಉತ್ಪನ್ನಗಳನ್ನು, ತಳಿಗಳನ್ನು ರೈತರೇ ಸಂಶೋಧಿಸಿದ್ದು, ಇವುಗಳಿಗೆ ಮಾರುಕಟ್ಟೆ ಒದಗಿಸುವುದೂ ಸೇರಿದಂತೆ ಹಲವು ಉದ್ದೇಶಗಳೊಡನೆ ಆರಂಭವಾಗುತ್ತಿರುವ ಈ ಕಂಪನಿ ಯಶಸ್ಸು ಕಾಣಲಿ ಎಂಬುದೇ ಎಲ್ಲರ ಹಾರೈಕೆ. ಇದಕ್ಕೆ ಪ್ರೇರಕವಾಗಿರುವ ಮೈಸೂರು ಆಕಾಶವಾಣಿ ಕೃಷಿರಂಗ ವಿಭಾಗದ ಮುಖ್ಯಸ್ಥ ಶ್ರೀ ಎನ್. ಕೇಶವಮೂರ್ತಿ ಹಾಗೂ ಅವರಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ನಿಲಯ ನಿರ್ದೇಶಕರಾದ ಶ್ರೀಮತಿ ವಿಜಯಾಹರನ್ ಅವರಿಗೆ ಅಭಿನಂದನೆಗಳು.
-ಎ.ಆರ್. ಪ್ರಕಾಶ್
ಉಪನಿರ್ದೇಶಕ
ವಾರ್ತಾ ಇಲಾಖೆ ,ಮೈಸೂರು

Tuesday, February 16, 2010


ತೋಟಗಾರಿಕಾ ಬೆಳೆ ಯೋಜನೆಗಳು ಹಾಗೂ ಮಾರಾಟದ ವ್ಯವಸ್ಥೆ
ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಹಣ್ಣು ಮತ್ತು ತರಕಾರಿಗಳು, ಔಷಧಿ ಗಿಡಗಳು, ಸಾಂಬಾರು ಪದಾರ್ಥಗಳು, ಸುಗಂಧಿತ ಗಿಡಗಳು ಹಾಗೂ ಹೂವುಗಳಿಂದ ಪ್ರತಿ ಎಕರೆಗೆ ಹೆಚ್ಚು ಉತ್ಪತ್ತಿ ಹಾಗೂ ಅವುಗಳಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ಹೆಚ್ಚು ಅವಕಾಶಗಳು ಇರುವುದರಿಂದ ಬೆಳೆಗಳನ್ನುಬಹಳ ಸಂಖ್ಯೆಯಲ್ಲಿ ರೈತರು ಬೆಳೆಯುತ್ತಿದ್ದಾರೆ. ದೇಶದಲ್ಲಿ ಒಣ ಭೂಮಿಯ ಬೇಸಾಯದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ ಇದೆ ಹಾಗೂ ನೀರಾವರಿ ಇಲ್ಲದ ಪ್ರದೇಶಗಳಲ್ಲಿ ಇನ್ನು ಅಧಿಕ ಪ್ರಮಾಣದಲ್ಲಿ ತೋಟಗಾರಿಕಾ ಬೆಳೆಗಳು ಉತ್ಪಾದಿಸುವ ಸಾಮರ್ಥ್ಯ ಇದೆ. ಪ್ರಗತಿ ಹೊಂದಿರುವ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಆಧುನಿಕ ತೋಟಗಾರಿಕೆಯಲ್ಲಿ ಒಂದು ಅಗ್ರಸ್ಥಾನನ್ನು ಹೊಂದಿರುತ್ತದೆ. ರಾಜ್ಯದ ಬಗೆ ಬಗೆಯ ಭೂ ಗುಣ ಹಾಗೂ ಹವಾಗುಣಗಳಲ್ಲಿ ಭಿನ್ನ ಭಿನ್ನ ತೋಟಗಾರಿಕಾ ಬೆಳೆಗಳು ಬೆಳೆಯಲು ಅನುಕೂಲವಾಗಿದೆ. ಹೀಗಾಗಿ ಕರ್ನಾಟಕ ರಾಜ್ಯವು ದೇಶದಲ್ಲಿ ಹಣ್ಣುಗಳ ಬೆಳೆಯಲ್ಲಿ ಎರಡನೇ ಸ್ಥಾನ, ತರಕಾರಿ ಬೆಳೆಗಳಲ್ಲಿ ಐದನೆಯ ಸ್ಥಾನ, ಹೂವುಗಳಲ್ಲಿ ಮೂರನೆಯ ಸ್ಥಾನ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಮೂರನೆಯ ಸ್ಥಾನದಲ್ಲಿ ಇದೆ ಅಲ್ಲದೆ ಸಾಂಬಾರು, ಸುಗಂಧಿತ ಮತ್ತು ಔಷಧಿ ಬೆಳೆಗಳಲ್ಲಿ ರಾಜ್ಯಕ್ಕೆ ಕೀರ್ತಿ ಬಂದಿರುತ್ತದೆ.
ತೋಟಗಾರಿಕಾ ಬೆಳೆಗಳು ಗಣನೀಯವಾಗಿ ಉತ್ಪಾದನೆಯಲ್ಲಿ ಹೆಚ್ಚಳವನ್ನು ಗುರಿ ಸಾಧಿಸಲು ಸದರಿ ಬೆಳೆಗಳನ್ನು ಬೆಳೆಯಲು ಸಹ ಹಲವಾರು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಅವುಗಳು ಎಂದರೆ;

1. ಆಯ್ದ ತೋಟಗಾರಿಕಾ ಉತ್ಪನ್ನಗಳನ್ನು ಗುಂಪುಗಳಲ್ಲಿ ಅಭಿವೃದ್ಧಿಪಡಿಸಿ ಅವುಗಳನ್ನು ವಾಣಿಜ್ಯ ಆಧಾರದ ಮೇರೆಗೆ ಬೆಳೆಯುವುದು
2. ಉತ್ತಮ ಗುಣಮಟ್ಟದ ಬಿತ್ತನೆಗಾಗಿ ಸಹಯೋಗಿಕ ಕ್ರಮಗಳು ಕೈಗೊಳ್ಳುವುದು
3. ಹಾಲಿ ಮುಪ್ಪು ಆಗಿರುವ ತೋಟಗಳ ಉತ್ಪತ್ತಿ ಹೆಚ್ಚಿಸಲು ಹೈಬ್ರಿಡ್ ತಳಿಗಳ ಭಿತ್ತನೆ ಮಾಡುವುದು
4. ಬೆಳೆಗಳ ಉತ್ಪತ್ತಿಯನ್ನು ಹೆಚ್ಚಿಸಲು ಹೊಸ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವುದು
5. ಬೆಳೆಗಾರರಿಗೆ ಉತ್ತಮ ಗುಣಮಟ್ಟದ ತೋಟಗಾರಿಕಾ ಬೆಳೆಗಳುನ್ನು ಬೆಳೆಯಲು ತರಬೇತಿ ನೀಡುವುದು ಹಾಗೂ ಮಾದರಿ ತೋಟಗಳಿಗೆ ಭೇಟಿ ಮೂಲಕ ಅವರ ಆಸಕ್ತಿಯ ಗುಣಮಟ್ಟವನ್ನು ಹೆಚ್ಚಿಸುವುದು
6. ಹೊಸ ತೋಟಗಳನ್ನು ಅಭಿವೃದ್ಧಿಪಡಿಸುವುದು. ಅಂತರ ಬೇಸಾಯ ಪದ್ಧತಿಗೆ ಪ್ರೋತ್ಸಾಹ ನೀಡುವುದು ಹಾಗೂ ಸಣ್ಣ ಸಣ್ಣ ಬಂಡುಗಳ ಮೂಲಕ ನೀರಾವರಿ ಪರಿಣಾಮಕಾರಿಯಾಗಿ ಉಪಯೋಗಿಸುವುದು.

ತೋಟಗಾರಿಕಾ ಬೆಳೆಗಳ ಕಟಾವು, ಪ್ಯಾಕೇಜಿಂಗ್ ಹಾಗೂ ಸಾಗಾಣಿಕೆ
ತೋಟಗಾರಿಕಾ ಬೆಳೆಗಳು, ವಿಶೇಷವಾಗಿ ತರಕಾರಿಗಳು, ಹಣ್ಣುಗಳ ಹಾಗೂ ಹೂವು ಬೆಳೆಗಳನ್ನು ಕಟಾವು ಬಹಳ ಜಾಗರೂಕತೆಯಿಂದ ಮಾಡಬೇಕೆಂದು ವಾಡಿಕೆ. ಕೊಯ್ಲು ಮಾಡುವಾಗ ಸರಿಯಾದ ಕ್ರಮಗಳನ್ನು ಕೈಗೊಂಡಾಗ ಉತ್ಪನ್ನದ ನಷ್ಟ ಪ್ರಮಾಣವು ತಡೆಗಟ್ಟಬಹುದಾಗಿದೆ. ಪ್ರತಿಯೊಂದು ತೋಟಗಾರಿಕಾ ಉತ್ಪನ್ನವು ವಿಶೇಷ ಗುಣಗಳನ್ನು ಹೊಂದಿರುವುದರಿಂದ ಅವುಗಳನ್ನು ಕಟಾವು ಮಾಡಿದ ನಂತರ ತೋಟದಿಂದ ಪ್ರಥಮ ಹಂತದಲ್ಲಿ ಶೇಖರಣೆ ಮಾಡುವ ನಿರ್ವಹಣೆ ಕೆಲಸ ಬಹಳ ಮುಖ್ಯವಾಗಿದೆ. ಉತ್ಪನ್ನಗಳನ್ನು ಮಾರುಕಟ್ಟೆಗೆ ಮಾರಾಟಕ್ಕಾಗಿ ತೆಗೆದುಕೊಂಡು ಹೋಗಲು ಸಾಗಾಣಿಕೆ ಮಾಡುವುದು ಸಾಮಾನ್ಯ ಕಾರ್ಯವಾಗಿರುತ್ತದೆ. ಆದರೆ, ಉತ್ಪನ್ನವು ಪ್ಯಾಕೇಜಿಂಗ್ ಮಾಡುವ ಮುಖ್ಯ ಉದ್ದೇಶಗಳು ರೀತಿ ಇರುತ್ತದೆ.

1. ಉತ್ಪನ್ನದ ಸಂರಕ್ಷಣೆ
ಉತ್ಪನ್ನದ ಸಂರಕ್ಷಣೆಯೇ ಪ್ಯಾಕೇಜಿಂಗ್ ಮಾಡುವ ಮೊದಲನೆಯ ಉದ್ದೇಶವಾಗಿರುತ್ತದೆ. ಆದುದರಿಂದ, ಪ್ಯಾಕೇಜಿಂಗ್ ಮಾಡುವಾಗ ಉತ್ಪನ್ನದ ಗುಣ ಧರ್ಮಗಳು, ಯಾವ ರೀತಿಯ ಉತ್ಪನ್ನ ಇದೆ ಹಾಗೂ ಮಾರುಕಟ್ಟೆ ಸಾಗಿಸಲು ದೂರ ಎಷ್ಟು ಇದೆ, ಯಾವ ಸ್ಥಳಕ್ಕೆ ಉತ್ಪನ್ನವು ಸಾಗಿಸುವ ಅವಶ್ಯಕತೆ ಇದೆ. ಸ್ಥಳದ ಹವಾಮಾನ ಯಾವ ರೀತಿ ಇದೆ, ಕೆಲವು ಅಂಶಗಳು ಗಮನದಲ್ಲಿಟ್ಟು ಕೊಂಡು ಉತ್ಪನ್ನ ಪ್ಯಾಕೇಜಿಂಗ್ ಮಾಡಬೇಕು.

2. ಉತ್ಪನ್ನದ ಸುರಕ್ಷತೆ
ಉತ್ಪನ್ನದ ಸುರಕ್ಷತೆಯನ್ನು ಹಾಗೂ ಗುಣಮಟ್ಟ ಕಾಪಾಡುವುದೇ ಪ್ಯಾಕೇಜಿಂಗ್ ಮಾಡುವ ಮುಖ್ಯ ಉದ್ದೇಶವಾಗಿರುತ್ತದೆ. ಜೊತೆಗೆ ಉತ್ಪನ್ನಗಳನ್ನು ಸಂರಕ್ಷಿಸಲು ಹಾಗೂ ಅವುಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಪ್ಯಾಕೇಜಿಂಗ್ ಮಾಡುವ ಮುಖ್ಯ ಉದ್ದೇಶವಾಗಿದೆ. ಸದರಿ ಉತ್ಪನ್ನದ ಗುಣಮಟ್ಟ ಸಂರಕ್ಷಣೆ ಮಾಡುವುದರ ಜೊತೆಗೆ ಸಾಗಿಸುವ ಸಮಯದಲ್ಲಿ ಉತ್ಪನ್ನ ಹಾಳಾಗದಂತೆ ಸಾಗಾಣಿಕೆ ಮಾಧ್ಯಮ ಆಯ್ಕೆ ಮಾಡಬೇಕು.
ಕೆಲವು ತೋಟಗಾರಿಕಾ ಉತ್ಪನ್ನಗಳನ್ನು ಮಾರುಕಟ್ಟೆಗೆ ಮಾರಾಟಕ್ಕಾಗಿ ಸಾಗಿಸುವ ಮುನ್ನ ತೋಟದ ಹಂತದಲ್ಲಿಯೇ ಅಲ್ಪ ಪ್ರಮಾಣದಲ್ಲಿ ಸಂಸ್ಕರಣೆ ಮಾಡುವ ಅಗತ್ಯ ಇರುತ್ತದೆ. ಉದಾಹರಣೆಗೆ ತೆಂಗಿನಕಾಯಿ, ಈರುಳ್ಳಿ, ಆಲೂಗಡ್ಡೆ, ಗೇರುಬೀಜ. ಮುಖ್ಯವಾಗಿ ಬೆಳೆಗಾರರು ತಾವು ಬೆಳೆದ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಬರಬೇಕೆಂದು ಮಾಡುತ್ತಾರೆ.

ತೋಟಗಾರಿಕಾ ಬೆಳೆಗಳನ್ನು ಹೆಚ್ಚು ಪ್ರಮಾಣದಲ್ಲಿ ಮಾರಾಟ ಮಾಡುವ ವ್ಯವಸ್ಥೆ
ಕರ್ನಾಟಕ ಕೃಷಿ ಉತ್ಪನ್ನ ಮಾರಾಟ (ನಿಯಂತ್ರಣ) ಶಾಸನ, 1966 ಪ್ರಕಾರವಾಗಿ ರಾಜ್ಯದಲ್ಲಿ ತೋಟಗಾರಿಕಾ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಸುಮಾರು 50 ಕೃಷಿ ಉತ್ಪನ್ನ ಮಾರುಕಟ್ಟೆಗಳು ಲಭ್ಯವಿದೆ. ನಿಯಂತ್ರಣ ಶಾಸನ, 1966 ಪ್ರಕಾರವಾಗಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ವಿಶೇಷ ಮಾರುಕಟ್ಟೆಗಳನ್ನು ಸ್ಥಾಪಿಸುವ ಅವಕಾಶ ಇದೆ. ಸಧ್ಯದಲ್ಲಿ ಇಂತಹ ಹಣ್ಣು ಮತ್ತು ತರಕಾರಿಗಳ ವಿಶೇಷ ಮಾರುಕಟ್ಟೆಗಳನ್ನು ಬೆಂಗಳೂರು ನಗರದಲ್ಲಿ ಹಾಗೂ ಮೈಸೂರಿನಲ್ಲಿ ಸ್ಥಾಪಿಸಲಾಗಿದೆ. ಬರುವ ದಿನಗಳಲ್ಲಿ ಬೆಂಗಳೂರು ನಗರದ ಹೊರ ಭಾಗಗಳಲ್ಲಿ ಸೆಟಲೈಟ್ ಮಾರುಕಟ್ಟೆಗಳನ್ನು ಸ್ಥಾಪಿಸಿ ಬೆಂಗಳೂರು ಸುತ್ತ ಮತ್ತು ಪ್ರದೇಶಗಳಲ್ಲಿ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ದೊರಕಿಸಿಕೊಡುವ ಕಾರ್ಯಕ್ರಮ ಕೃಷಿ ಮಾರಾಟ ಇಲಾಖೆಯು ಹಮ್ಮಿಕೊಂಡಿರುತ್ತದೆ.

ರೈತರ ಸಂತೆ
ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ ಕೃಷಿ ಮಾರಾಟ ಇಲಾಖೆಯ ರೈತರ ಸಂತೆ ಯೋಜನೆಯು ಸಧ್ಯದಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಪ್ರಾರಂಭವಾಗಿದ್ದು, ಮುಖ್ಯವಾಗಿ ರೈತರ ಸಂತೆಯಲ್ಲಿ ಬೆಳೆಗಾರರು ನೇರವಾಗಿ ಗ್ರಾಹಕರಿಗೆ ಅವರು ಬೆಳೆದ ತೋಟಗಾರಿಕಾ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಹೀಗಾಗಿ ಇದು ಅಲ್ಪ ಪ್ರಮಾಣದ ಮಾರಾಟ ವ್ಯವಸ್ಥೆ. ಆದರೆ ಗ್ರಾಹಕರು ನೀಡುವ ಬೆಲೆಯಲ್ಲಿ ಪೂರ್ಣ ಭಾಗವು ರೈತರಿಗೆ ದೊರಕುತ್ತದೆ. ಈಗಾಗಲೆ ರಾಜ್ಯದ 105 ಕೇಂದ್ರಗಳಲ್ಲಿ ರೈತರ ಸಂತೆ ಸ್ಥಾಪನೆಗಾಗಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿಯಾಗಿರುತ್ತದೆ. ರೈತರ ಸಂತೆಗಳ ನಿರ್ಮಾಣ ಕಾರ್ಯವು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸೇರಿದೆ. ವ್ಯಾಪಾರಕ್ಕಾಗಿ ಬಂದಂತಹ ರೈತರಿಗೆ ಬೇಕಾದಂತಹ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಕ್ರೇಟ್ಗಳು ಹಾಗೂ ತೂಕದ ತಕ್ಕಡಿ ನೀಡಲಾಗುತ್ತದೆ ಹಾಗೂ ಪ್ರತಿಯೊಂದು ಕ್ರೇಟ್ಗೆ 50 ಪೈಸೆ ಹಾಗೂ ತೂಕದ ತಕಡಿಗೆ 1 ರೂ. ಶುಲ್ಕವನ್ನು ರೈತರು ಪಾವತಿ ಮಾಡಬೇಕು .
ಕೃಷಿ ಉತ್ಪನ್ನ ಮಾರುಕಟ್ಟೆಗಳ ಜೊತೆಗೆ ರಾಜ್ಯದಲ್ಲಿ ಹಾಪ್ಕಾಮ್ಸ್ ಸಂಸ್ಥೆಯು ಸಹ ವಿಶೇಷವಾಗಿ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಮಾರಾಟದ ವ್ಯವಸ್ಥೆ ನೀಡುತ್ತದೆ. ಹಾಪ್ಕಾಮ್ಸ್ ಮೂಲಕ ಪ್ರತಿದಿನ ಸುಮಾರು 100-200 ಮೆಟ್ರಿಕ್ ಟನ್ನುಗಳಷ್ಟು ಉತ್ಪನ್ನವು ವಿಲೇವಾರಿ ಮಾಡುವ ಸಾಮರ್ಥ್ಯ ಇದೆ ಹಾಗೂ ರಾಜ್ಯದ 17 ಜಿಲ್ಲೆಗಳಲ್ಲಿ ಹಾಪ್ಕಾಮ್ಸ್ ಸಂಘಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಸಹಕಾರ ಸಂಘಗಳ ಚಟುವಟಿಕೆಗಳ ಸಮನ್ವಯಗೊಳಿಸಲು ರಾಜ್ಯಸರ್ಕಾರದಿಂದ ಕರ್ನಾಟಕ ರಾಜ್ಯ ತೋಟಗಾರಿಕಾ ಬೆಳೆಗಳ ಸಹಕಾರ ಫೆಡರೇಷನ್ ಸಹ ಸ್ಥಾಪಿಸಲಾಗಿದೆ.

ಸಹಕಾರ ಮಾರಾಟ:ಕರ್ನಾಟಕ ಕೃಷಿ ಉತ್ಪನ್ನ ಮಾರಾಟ ನಿಯಂತ್ರಣ ಶಾಸನ 1966 ಪ್ರಕಾರವಾಗಿ ರಾಜ್ಯದ ಮಾರುಕಟ್ಟೆಗಳ ಕ್ಷೇತ್ರದಲ್ಲಿ, ಸಹಕಾರ ತತ್ವದಂತೆ, ಸಹಕಾರ ಸಂಘಗಳು ರಚಿಸಿ, ಮಾರುಕಟ್ಟೆ ಸಮಿತಿಗಳಿಂದ ಲೈಸನ್ಸ್ ಪಡೆದು ಕೃಷಿ ಉತ್ಪನ್ನಗಳ/ತೋಟಗಾರಿಕ ಉತ್ಪನ್ನಗಳ ಮಾರಾಟ ಕಾರ್ಯವನ್ನು ಕೈಗೊಳ್ಳಬಹುದಾಗಿದೆ. ಶಾಸನದಲ್ಲಿ ಇಂತಹ ಸಹಕಾರ ಸಂಘಗಳಿಗೆ ವಿಶೇಷ ಅವಕಾಶ ಮಾಡಲಾಗಿದೆ, ಹಾಗೂ ಮಾರುಕಟ್ಟೆ ಫೀಯಲ್ಲಿ ಶೇ. 20 ರಷ್ಟು ರಿಯಾಯಿತಿ ನೀಡಲಾಗಿದೆ. ಜೊತೆಗೆ ಸಹಕಾರ ಸಂಘಗಳು ಮಾರುಕಟ್ಟೆ ಕ್ಷೇತ್ರದಲ್ಲಿ ಎಲ್ಲಾದರೂ ಮಾರಾಟದ ಚಟುವಟಿಕೆಮಾಡಲು ಅವಕಾಸ ಇದೆ.

ಹೂವುಗಳ ಮಾರಾಟ:
ರಾಜ್ಯದಲ್ಲಿ ಸುಮಾರು 1800 ಹೆ.ಪ್ರದೇಶದಲ್ಲಿ ಹೂವುಗಳು ಬೆಲೆಯಲಾಗುತ್ತದೆ. ಹೂವುಗಳು ಸಹ ಕ್ರಮ ಪಡಿಸಿದ ಉತ್ಪನ್ನವಾಗಿದ್ದು, ರಾಜ್ಯದಲ್ಲಿ ಬೆಂಗಳೂರು, ದೊಡ್ಡಬಳ್ಳಾಪುರ ಮತ್ತು ಕೃಷ್ಣರಾಜಪೇಟೆ ಮಾರುಕಟ್ಟೆಗಳಲ್ಲಿ ಹೂವಿನ ವಹಿವಾಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ.
ಬೆಂಗಳೂರಿನಲ್ಲಿ ಆಂತರರಾಷ್ಟ್ರೀಯ ಹೂವುಗಳ ಮಾರುಕಟ್ಟೆ, ರಾಜ್ಯ ಸರ್ಕಾರವು ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಶನ್ ಇದರ ಮೂಲಕ ಪ್ರಾರಂಭ ಮಾಡಿರುತ್ತಾರೆ. ಹೆಬ್ಬಾಳದಲ್ಲಿ ಅಂತರರಾಷ್ಟ್ರೀಯ ಮಾದರಿಯ ನೂತನವಾದ ಹೂವುಗಳ ಮಾರುಕಟ್ಟೆ ದಿನ ನಿತ್ಯ ನಡೆಯುತ್ತಿದೆ. ಗುಲಾಬಿ, ಜೆರಬರಾ, ಅಂಥೊರಿಯಂ ಮುಂತಾದ ಹೂವುಗಳು ನೂತನವಾದ ಮಾರುಕಟ್ಟೆಯ ಮೂಲಕ ವ್ಯಾಪಾರವಾಗುತ್ತದೆ. ಆಣಣಛಿ ಖಥಿಣಜಟ ಮೂಲಕ ಹೂವುಗಳ ಮಾರಾಟವನ್ನು ಮಾರುಕಟ್ಟೆಯಲ್ಲಿ ನಡೆಯುತ್ತಿದೆ. 100-150 ವರ್ತಕರು ಬಹಿರಂಗ ಹರಾಜಿನಲ್ಲಿ ಬಾಗವಹಿಸಿವುದರ ಮೂಲಕ ಹೂವುಗಳು ಖರೀದಿಸುವ ಅವಕಾಶ ಮಾಡಲಾಗಿದೆ. ಹೂವುಗಳನ್ನು ಶೇಖರಣೆ ಮಾಡಲಿ ಶೀತಲಗೃಹಗಳ ವ್ಯವಸ್ಥೆ ಸಹಮಾಡಲಾಗಿದೆ. ರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ ರೈತರು ಹಾಗೂ ಹೊರರಾಜ್ಯಗಳಿಂದ ಸಹ ಬೆಳೆಗಾರರು ಹೂವುಗಳು ಮಾರಾಟಕ್ಕಾಗಿ ತರುತ್ತಾರೆ, ಹೂವು ಬೆಳೆಗಾರರಿಗೆ ತಕ್ಷಣ ಹಣ ಸಂದಾಯ ಮಾಡುವ ವ್ಯವಸ್ಥೆ ಸಹ ಮಾಡಲಾಗಿದೆ. ಹೂವುಗಳು ಬೆಳೆಯಲು ಸಹ ಸಲಹೆ ನೀಡಲಾಗುತ್ತದೆ.

ಸಫಲ್ ಮಾರುಕಟ್ಟೆ
ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿಯಿಂದ ಬೆಂಗಳೂರು ಕನ್ನಮಂಗಲದಲ್ಲಿ ಸಫಲ್ ಮಾರುಕಟ್ಟೆ ಸ್ಥಾಪಿಸಲಾಗಿದೆ. ಸುಮಾರು 100 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿದೆ. ಸಫಲ್ ಮಾರುಕಟ್ಟೆ ಒಂದು ನೂತನ ಪ್ರಯೋಗ ಎಂದು ಹೇಳಬಹುದು. ಕನರ್ಾಟಕ ಕೃಷಿ ಉತ್ಪನ್ನ್ನ ಮಾರಾಟ (ನಿಯಂತ್ರಣ) ಶಾಸನ, 1966 ರಲ್ಲಿ ತಿದ್ದುಪಡಿ ಮಾಡಿ ಮಾರುಕಟ್ಟೆಗೆ ಪೂರ್ಣ ರೂಪದಲ್ಲಿ ಮುಕ್ತ ಮಾಡಲಾಗಿದೆ. ಸಫಲ್ ಮಾರುಕಟ್ಟೆಯಿಂದ ಹಣ್ಣು ಹಾಗೂ ತರಕಾರಿ ಬೆಳೆಗಾರರು ಗ್ರಾಮ ಮಟ್ಟದಲ್ಲಿ ಸಹಕಾರ ಸಂಘಗಳು ಸ್ಥಾಪಿಸಿ, ಸಫಲ್ ಮಾರುಕಟ್ಟೆಗೆ ಬೇಕಾದಂತಹ ಹಣ್ಣು ಮತ್ತು ತರಕಾರಿಗಳು ಹಾಗೂ ಅವುಗಳ ಗುಣಧರ್ಮಗಳ ಬಗ್ಗೆ ಸಫಲ್ ಮಾರುಕಟ್ಟೆ ಅಧಿಕಾರಿಗಳ ಮೂಲಕ ಮಾಹಿತಿ ನೀಡುವುದರ ಜೊತೆಗೆ ತಾಂತ್ರಿಕ ಸಲಹೆ ಸಹ ನೀಡಲಾಗುತ್ತದೆ. ಪ್ರಸ್ತುತದಲ್ಲಿ ಸದರಿ ಮಾರುಕಟ್ಟೆಯಿಂದ ಸುಮಾರು 300 ಮೆಟ್ರಿಕ್ ಟನ್ನುಗಳಷ್ಟು ಉತ್ಪನ್ನವನ್ನು ವಿಲೇವಾರಿ ಮಾಡಲಾಗುತ್ತಿದೆ. ಹಂತ ಹಂತವಾಗಿ ಸದರಿ ಮಾರುಕಟ್ಟೆಯ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ತೋಟಗಾರಿಕಾ ಉತ್ಪನ್ನಗಳನ್ನು ಖರೀದಿ ಮಾಡುವ ಕಾರ್ಯಕ್ರಮ ಇದೆ.

ಕೃಷಿ ಉತ್ಪನ್ನಗಳ ಮಾರುಕಟ್ಟೆ ಮಾಹಿತಿ ಪ್ರಸಾರ
ಕೃಷಿ ಮಾರಾಟ ಇಲಾಖೆಯ ವೆಬ್ ಸೈಟ್ ಮೂಲಕ ರಾಜ್ಯದ ಎಲ್ಲಾ ಮಾರುಕಟ್ಟೆ ಸಮಿತಿಗಳ ಕ್ಷೇತ್ರದಲ್ಲಿ ಆವಕವಾಗುವ ಕೃಷಿ ಉತ್ಪನ್ನಗಳ ಆವಕ ಹಾಗೂ ಧಾರಣೆಗಳು ಪ್ರಸಾರ ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲಾ ಮಾರುಕಟ್ಟೆ ಸಮಿತಿಗಳು ದಿನನಿತ್ಯ ಅವರ ಮಾರುಕಟ್ಟೆಗಳಲ್ಲಿ ಆವಕವಾಗುವ ಕೃಷಿ ಉತ್ಪನ್ನಗಳ ಮಾಹಿತಿಯ ಅವರಲ್ಲಿ ಲಭ್ಯವಿರುವ ಗಣಕಯಂತ್ರದ ಮೂಲಕ ಇಲಾಖೆಯ ವೆಬ್ಸೈಟ್ಗೆ ನೀಡುವ ಮೂಲಕ ರೈತರಿಗೆ ಹಾಗೂ ಮಾರುಕಟ್ಟೆ ಉಪಯೋಗಸ್ಥರಿಗೆ ಪ್ರಸಾರವಾಗುತ್ತಿದೆ. ಕನರ್ಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ವೆಬ್ಸೈಟ್ ಮೂಲಕ ರಾಜ್ಯದ ಎಲ್ಲಾ ಮಾರುಕಟ್ಟೆ ಸಮಿತಿಗಳ ಬಗ್ಗೆ ಮಾಹಿತಿ ನೀಡಲು ಸಿದ್ಧವಾಗಿರುತ್ತದೆ. ಕೃಷಿ ಉತ್ಪನ್ನಗಳ ಬೆಲೆಗಳ ಮುನ್ಸೂಚನೆ ಸಹ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಮಾರಾಟ ಹಾಗೂ ತಪಾಸಣಾ ನಿರ್ದೇಶನಾಲಯದ ವೆಬ್ಸೈಟ್ ಮೂಲಕ ದೇಶದ ಎಲ್ಲಾ ಮಾರುಕಟ್ಟೆಗಳಲ್ಲಿ ಆವಕವಾಗುವ ಎಲ್ಲಾ ಕೃಷಿ ಉತ್ಪನ್ನಗಳ ಆವಕ ಹಾಗೂ ಧಾರಣೆಗಳ ಬಗ್ಗೆ ಮಾಹಿತಿ ಲಭ್ಯವಿರುತ್ತದೆ. ಕೃಷಿ ಮಾರಾಟ ಇಲಾಕೆಯ ಹಾಗೂ ಮಂಡಳಿಯ ವೆಬ್ಸೈಟ್ಗಳ ಮೂಲಕ, ಕೃಷಿ ಹಾಗೂ ತೋಟಗಾರಿಕೆ ಉತ್ಪಾದನೆಯಲ್ಲಿ, ಮಾರಾಟದಲ್ಲಿ ಹಾಗು ರಫ್ತಿಗೆ ಮುಂತಾದ ಚಟುವಟಿಕೆಗಳಲ್ಲಿ ತೊಡಗಿರುವ, ಕೇಂದ್ರ ಸರ್ಕಾರದ ಸಂಸ್ಥೆಗಳ ವೆಬ್ಸೈಟ್ಗಳಿಗೆ ಭೇಟಿನೀಡಿ, ಸಮಘ್ರವಾದ ಮಾಹಿತಿಯು ಪಡೆಯಬಹುದಾಗಿದೆ. ವಿಶ್ವ ವ್ಯಾಪಾರ ಸಂಘಟನೆ ವೆಬ್ಸೈಟ್ಗೂ ಸಹ ಭೇಟಿನೀಡಿ ಮಾಹಿತಿ ಪಡೆಯಬಹುದಾಗಿದೆ.

ತೋಟಗಾರಿಕಾ ಬೆಳೆಗಳ ಬಗ್ಗೆ ಕೇಂದ್ರ ಸರ್ಕಾರದ ಸಂಸ್ಥೆಗಳು

1. ರಾಷ್ಟ್ರೀಯ ತೋಟಗಾರಿಕಾ ಮಂಡಳಿ
ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ಸ್ವಯಂ ಅಧಿಕಾರವುಳ್ಳ ಸಂಸ್ಥೆಯಾಗಿ ಕೇಂದ್ರ ಸರ್ಕಾರದಿಂದ ಸ್ಥಾಪಿತವಾಗಿದೆ. ಇದರ ಮುಖ್ಯ ಕಾರ್ಯಚಟುವಟಿಕೆಗಳು ದೇಶದಲ್ಲಿ ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆ ಹೆಚ್ಚಿಸುವುದು ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಸಂಸ್ಕರಣಾ ಹೆಚ್ಚಿಸುವುದು. ಹಣ್ಣು ಮತ್ತು ತರಕಾರಿಗಳ ಅಧಿಕ ಉತ್ಪಾದನೆಗಾಗಿ ಸಂಸ್ಕರಣಕ್ಕಾಗಿ ಹಾಗೂ ಮಾರಾಟರಂಗದಲ್ಲಿ, ಕೊಯ್ಲುನಂತರದ ನಿರ್ವಹಣೆಯಲ್ಲಿ ನಷ್ಟವನ್ನು ಕಡಿಮೆಮಾಡಿವುದು, ಇದರ ಜೊತೆಗೆ ಕೊಯ್ಲುನಂತರದ ನಿರ್ವಹಣೆಗಾಗಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ತೋಟಗಾರಿಕೆ ಬೆಳೆಗಳ ಮಾರುಕಟ್ಟೆ ಮಾಹಿತಿಬಲಪಡಿಸುವುದು, ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ಸಂಶೋಧನಾ ಕ್ರಮಗಳನ್ನು ಬಲಪಡಿಸುವುದು ತೋಟಗಾರಿಕಾ ಬೆಳೆಗಾರರಿಗೆ ಹಾಗೂ ಸಂಸ್ಕರಣದಲ್ಲಿ ತೊಡಗಿರುವ ಉದ್ದಿಮೆದಾರರಿಗೆ ಹೊಸ ತಂತ್ರಜ್ಞಾನದ ಬಗ್ಗೆ ತರಬೇತಿ ನೀಡುವುದು. ಹಣ್ಣು ಮತ್ತು ತರಕಾರಿಗಳನ್ನು ಹಾಗೂ ಅದರ ಸಂಸ್ಕರಿತ ಉತ್ಪನ್ನಗಳನ್ನು ಸೇವನೆಗಾಗಿ ಉತ್ತೇಜನ ಕ್ರಮಗಳನ್ನು ಕೈಗೊಳ್ಳುವುದು. ತೋಟಗಾರಿಕಾ ಬೆಳೆಗಾರರಿಗೆ ಉತ್ತಮ ಮಟ್ಟದ ತೋಟಗಾರಿಕಾ ಬೆಳೆಗಳು ಬೆಳೆಯಲು ಆರ್ಥಿಕ ನೆರವು ನೀಡುವುದು.

2. ಗೇರು ಹಾಗೂ ಕೊಕೊ ಅಭಿವೃದ್ಧಿ ನಿರ್ದೇಶನಾಲಯ
ಗೇರು ಹಾಗೂ ಕೊಕೊ ಅಭಿವೃದ್ಧಿ ನಿರ್ದೇಶನಾಲಯವು 1966 ರಲ್ಲಿ ಕೃಷಿ ಸಚಿವಾಲಯದ ನಿರ್ದೇಶನದ ಅಡಿಯಲ್ಲಿ ಸ್ಥಾಪನೆಮಾಡಿತ್ತು. ಪ್ರಾರಂಭದಲ್ಲಿ ಸದರಿ ನಿರ್ದೇಶನಾಲಯ ದೇಶದಲ್ಲಿ ಗೇರು ಅಭಿವೃದ್ಧಿಗಾಗಿ ಕಾರ್ಯ ನಿರ್ವಯಿಸಿಕೊಂಡು ಬಂದಿರುತ್ತದೆ. 1997 ರಲ್ಲಿ ದೇಶದ ಕೊಕೊ ಬೆಳೆಯ ಅಭಿವೃದ್ಧಿಮಾಡುವ ಜವಾಬ್ದಾರಿ ಸಹ ವಹಿಸಿಕೊಂಡಿರುತ್ತದೆ. ಸದರಿ ಸಂಸ್ಥೆಯು ಒಂದು ರಾಷ್ಟ್ರೀಯ ಮಟ್ಟದ ಏಜೇನ್ಸಿಯಾಗಿರುವುದರಿಂದ ಇದರ ಮುಖ್ಯ ಉದ್ದೇಶಗಳು ಕೊಕೊ ಮತ್ತು ಗೇರು ಅಭಿವೃದ್ದಿಗಾಗಿ ಯೋಜನೆಗಳನ್ನು ರೂಪಿಸುವುದು ಹಾಗು ಯೋಜನೆಗಳನ್ನು ಜಾರಿಗೆ ತರುವುದು , ದೇಶದ ಎಲ್ಲ ರಾಜ್ಯಗಳಲ್ಲಿ ಸದರಿ ಯೋಜನೆಗಳ ಮೇಲ್ವಿಚಾರಣೆ ಮಾಡಿವುದು ಬೆಳೆಗಳ ಸಂಶೋಧನೆಗಾಗಿ ಬೇಕಾಗಿರುವ ಕ್ರಮ ಕೈಗೊಳ್ಳುವುದು ಹಾಗೂ ತಾಂತ್ರಿಕ ಸಲಹೆ ನೀಡುವುದು ಹಾಗೂ ಬೆಳೆಗಳಿಗೆ ಸಂಬಂಧಪಟ್ಟಂತೆ ಕೊಯ್ಲುನಂತರದ ನಿರ್ವಹಣೆಗಳಾದ ಸಂಸ್ಕರಣೆ ಮಾರಾಟ ಹಾಗೂ ಇನ್ನಿತರ ಕಾರ್ಯಕ್ರಮಗಳನು ಗುರುತುಪಡಿಸಿ ಅವುಗಳನ್ನು ಜಾರಿಗೆ ತರುವುದು ಬೆಳೆಗಳ ವಿಸ್ತೀರ್ಣ, ಉತ್ಪಾದನೆ, ಮಾರುಕಟ್ಟೆ ಸ್ಥಿತಿಗತಿ ರಫ್ತು ಹಾಗೂ ಆಮದು ಬಗ್ಗೆ ಅಂಕಿ-ಅಂಶಗಳನ್ನು ನೀಡುವುದು ಹಾಗೂ ಬೆಳೆಗಳಿಗೆ ಸಂಬಂಧಪಟ್ಟಂತೆ ಪತ್ರಿಕೆ/ಕರಪತ್ರಗಳ ಮೂಲಕ ಮಾಹಿತಿ ಪ್ರಸಾರ ಮಾಡುವುದು ಹಾಗೂ ಕಾರ್ಯಗಾರಗಳು ಮತ್ತು ವಸ್ತುಪ್ರದರ್ಶನದಲ್ಲಿ ಪ್ರಚಾರ ಕೈಗೊಳ್ಳುವುದು ಕೊನೆಯದಾಗಿ ಬೆಳೆಗಳನ್ನು ಮಾರಾಟ ಮಾಡುವ ಬಗ್ಗೆ ಬೆಳೆಗಾರರಿಗೆ ಲಾಭವಾಗುವಂತೆ ಮಾರ್ಗದರ್ಶನ ನೀಡುವುದು.
ತೆಂಗಿನಕಾಯಿ ಹಾಗೂ ಅಡಿಕೆ ಬೆಳೆಗಳನ್ನು ಹೊರತುಪಡಿಸಿ ಇನ್ನಿತರ ತೋಟಗಾರಿಕಾ ಬೆಳೆಗಳ ಬಗ್ಗೆ ಅಭಿವೃದ್ಧಿ ಕ್ರಮಗಳ ಮೇಲ್ವಿಚಾರಣೆ ಮತ್ತು ಸಮನ್ವಯವಾಗಿ ಕಾರ್ಯನಿರ್ವಹಣೆ. ಗೇರು ಮತ್ತು ಕೊಕೊ ಬಗ್ಗೆ ರಾಷ್ಟ್ರೀಯ ಮಟ್ಟದ ಕಾಯರ್ಾಗಾರಗಳನ್ನು ಬೆಳೆಗಾರರ ಉಪಯೋಗಕ್ಕಾಗಿ ಏರ್ಪಡಿಸುವುದು.

3. ಅಡಿಕೆ ಹಾಗೂ ಸಾಂಬಾರು ಬೆಳೆಗಳ ನಿರ್ದೇಶನಾಲಯ
ಸಂಸ್ಥೆಯು 1966 ರಲ್ಲಿ ಸ್ಥಾಪನೆಯಾಗಿದ್ದು, ಅಡಿಕೆ, ಸಾಂಬಾರು ಬೆಳೆಗಳು ಸುಗಂಧಿತ ಹಾಗೂ ಔಷಧಿ ತೋಟಗಳ ಅಭಿವೃದ್ಧಿಯ ಮೇಲ್ವಿಚಾರಣೆ ಮತ್ತು ಪರಿಣಾಮಕಾರಿಯಾಗಿ ಅಭಿವೃದ್ಧಿ ಯೋಜನೆಗಳು ಕಾರ್ಯ ರೂಪಕ್ಕೆ ತರುವುದು.

4. ಪ್ಲಾಸ್ಟಿಕಲ್ಚರ್ ತಾಂತ್ರಿಕತೆಯನ್ನು ಜಾರಿಗೆ ತರುವ ರಾಷ್ಟ್ರೀಯ ಸಮಿತಿ
ಸಂಸ್ಥೆಯು 1993 ರಲ್ಲಿ ಸ್ಥಾಪನೆಯಾಗಿರುತ್ತದೆ. ರಸಾಯನಿಕ ಹಾಗೂ ರಸಗೊಬ್ಬರದ ಸಚಿವಾಲಯದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಿತಿಯ ದೇಶದಲ್ಲಿ 17 ಕೇಂದ್ರಗಳು ಸ್ಥಾಪನೆಯಾಗಿದೆ, ಮುಖ್ಯವಾಗಿ ದೇಶದಲ್ಲಿ ಹನಿನೀರಾವರಿ, ನಿಯಂತ್ರಿತ ಹವಾಮಾನದಲ್ಲಿ ಬೆಳೆಯುವ ತೋಟಗಾರಿಕಾ ಬೆಳೆಗಳ ಬಗ್ಗೆ ಸೂಕ್ಷ್ಮ ಕೃಷಿ ಅಭಿವೃದ್ಧಿ ಕೇಂದ್ರಗಳ ಮೂಲಕ ಅಭಿವೃದ್ಧಿ ಹಾಗೂ ಮೇಲ್ವಿಚಾರಣೆ ಮಾಡುವುದು. ಕೇಂದ್ರ ಸರ್ಕಾರದ ಕೃಷಿ ಸಚಿವರು ಇದರ ಅಧ್ಯಕ್ಷರು ಆಗಿರುತ್ತಾರೆ.

5. ತೆಂಗು ಅಭಿವೃದ್ಧಿ ಮಂಡಳಿ
ತೆಂಗು ಅಭಿವೃದ್ಧಿ ಮಂಡಳಿಯು ಕೇಂದ್ರ ಸರ್ಕಾರದ ಶಾಸನ ಬದ್ದ ಸಂಸ್ಥೆಯಾಗಿ 1981 ರಲ್ಲಿ ಸ್ಥಾಪನೆಯಾಗಿರುತ್ತದೆ. ಇದರ ಕೇಂದ್ರ ಸ್ಥಾನವು ಕೇರಳದ ಕೊಚ್ಚಿಯಲ್ಲಿರುತ್ತದೆ ಹಾಗೂ ದೇಶದ ತೆಂಗು ಬೆಳೆಯುವ ಎಲ್ಲ ರಾಜ್ಯಗಳಲ್ಲಿ ಪ್ರಾದೇಶಿಕ ಕಛೇರಿಗಳು ತೆರೆದಿರುತ್ತದೆ. ಮಾರುಕಟ್ಟೆ ಹಾಗೂ ಮಾಹಿತಿ ಕೇಂದ್ರವನ್ನು ನವದೆಹಲಿಯಲ್ಲಿ ಹೊಂದಿರುತ್ತದೆ. ಇದರ ಮುಖ್ಯ ಕಾರ್ಯಚಟುವಟಿಕೆಗಳು ತೆಂಗು ಉದ್ಯಮದ ಅಭಿವೃದ್ಧಿ ಹಾಗೂ ರಫ್ತಿನ ಬಗ್ಗೆ ಉತ್ತೇಜನ ಕ್ರಮಗಳನ್ನು ಕೈಗೊಳ್ಳುವುದು, ತೆಂಗು ಬೆಳೆಗಾರರು ಹಾಗೂ ತೆಂಗು ಉದ್ಯಮದಲ್ಲಿ ತೊಡಗಿದವರಿಗೆ ತಾಂತ್ರಿಕ ಸಲಹೆ ನೀಡುವುದು ಹಾಗೂ ತೆಂಗು ಬೆಳೆ ವಿಸ್ತೀರ್ಣವನ್ನು ಹೆಚ್ಚಿಸಲು ಬೆಳೆಗಾರರಿಗೆ ಆರ್ಥಿಕ ಸವಲತ್ತುಗಳನ್ನು ನೀಡುವುದು. ತೆಂಗು ಮತ್ತು ಅದರ ಉಪ ಉತ್ಪನ್ನಗಳ ಆಮದು ಮಾಡಿಕೊಳ್ಳುವ ಸಲುವಾಗಿ ಸರ್ಕಾರಕ್ಕೆ ನಿಯಂತ್ರಣ ಕ್ರಮಗಳನ್ನು ಶಿಫಾರಸ್ಸುಮಾಡುವುದು. ತೆಂಗು ಬೆಳೆಯ ಬಗ್ಗೆ ಅಂಕಿ-ಅಂಶಗಳನ್ನು ಸಂಗ್ರಹಿಸಿ ಅದನ್ನು ಪ್ರಸಾರಮಾಡುವುದು, ಸಾಹಿತ್ಯ ಪ್ರಕಟಿಸುವುದು ಹಾಗೂ ತೆಂಗು ಅಭಿವೃದ್ಧಿಗಾಗಿ ಯೋಜನೆಗಳು ಅನುಷ್ಠಾನಕ್ಕೆ ತರುವುದು. ಮುಖ್ಯವಾಗಿ ತೆಂಗು ತೋಟಗಳಲ್ಲಿ ಅಂತರ ಬೇಸಾಯಕ್ಕೆ ಪ್ರೋತ್ಸಾಹ ನೀಡುವುದು. ಅಂತರ ಬೇಸಾಯದಲ್ಲಿ ಮುಖ್ಯವಾಗಿ ವಾಣಿಜ್ಯ ಬೆಳೆಗಳಾದ ತರಕಾರಿಗಳು, ಸಾಂಬಾರು ಬೆಳೆಗಳು, ಹೂವುಗಳು ಹಾಗೂ ಸುಗಂಧಿತ ಗಿಡಗಳು ಬೆಳೆಯಲು ಪ್ರೋತ್ಸಾಹಕ ಕ್ರಮಗಳು ಕೈಗೊಳ್ಳುವುದು.

6. ಕೃಷಿ ಹಾಗೂ ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ
ಪ್ರಾಧಿಕಾರವು 1986 ರಲ್ಲಿ ಸ್ಥಾಪನೆಯಾಗಿದೆ. ಸದರಿ ಪ್ರಾಧಿಕಾರವು ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯದ ಸಹಯೋಗದೊಡನೆ ದೇಶದಿಂದ ಕೃಷಿ ಹಾಗೂ ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತಿಗೆ ಉತ್ತೇಜನೆ ನೀಡುವುದು. ಸರ್ಕಾರಿ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗಳು ರಫ್ತು ಪ್ರಯತ್ನಕ್ಕಾಗಿ ಕೈಗೊಳ್ಳುವ ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ನೀಡುವುದು. ಖಾಸತಿ ಹಾಗೂ ಸಹಕಾರಿ ಕ್ಷೇತ್ರದ ಸಂಶೋಧನೆ ಮಾಡುವುದು, ಹಾಗೂ ಅಭಿವೃದ್ಧಿ ಸಂಸ್ಥೆಗಳು, ರಫ್ತು ಹೆಚ್ಚಿಸಲು ಸಹಾಯವಾಗುವ ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು, ರಫ್ತುದಾರರಿಗೆ ವ್ಯಾಪಾರಿ ಸಂಸ್ಥೆಗಳಿಗೆ ಆರ್ಥಿಕ ಸಹಾಯ ನೀಡುವುದು ರಫ್ತುದಾರರು, ರೈತರು, ವ್ಯಾಪಾರಿ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳು ಮೊದಲಾದವುಗಳಿಗೆ ಪ್ರಯೋಗಾಲಯಗಳ ಸ್ಥಾಪನೆಗೆ ಹಾಗೂ ಬಲವಡಿಸುವಿಕೆಗೆ ಆರ್ಥಿಕ ಸಹಾಯ ನೀಡುವುದು

7. ಮಾರಾಟ ಹಾಗೂ ತಪಾಸಣಾ ನಿರ್ದೇಶನಾಲಯ
ಸದರಿ ನಿರ್ದೇಶನಾಲಯ ಕೇಂದ್ರ ಸರ್ಕಾರದ ಕೃಷಿ ಮಾರಾಟದ ಬಗ್ಗೆ ಹಮ್ಮಿಕೊಂಡಿರುವ ಯೋಜನೆಗಳು ಜಾರಿಗೆ ತರುವುದೇ ಇದರ ಮುಖ್ಯ ಜವಾಬ್ದಾರಿಯಾಗಿರುತ್ತದೆ. ಸಂಸ್ಥೆಯು ಕೃಷಿ ಸಚಿವಾಲಯದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳ ಮಾರಾಟದ ಬಗ್ಗೆ ಪೇಟೆ ಮಾಹಿತಿ ಪ್ರಸಾರ ಮಾಡುವುದು ಹಾಗೂ ಕೃಷಿ ಮಾರಾಟಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳ ಮೇಲ್ವಿಚಾರಣೆ ಮಾಡುವುದು.

8. ಆಹಾರ ಸಂಸ್ಕರಣಾ ಉದ್ಯೋಗ ಸಚಿವಾಲಯ
ಸದರಿ ಸಚಿವಾಲಯಕ್ಕೆ ನೀಡಿರುವ ಆರ್ಥಿಕ ನೆರವಿನಿಂದ ಆಹಾರ ಸಂಸ್ಕರಣ ಉದ್ಯೋಗಕ್ಕೆ ಹಮ್ಮಿಕೊಂಡಿರುವ ಅಭಿವೃದ್ಧಿ ಯೋಜನೆಗಳು ಜಾರಿಗೆ ತರುವುದು.

9, ರಾಷ್ಟ್ರೀಯ ಔಷಧಿ ಗಿಡಗಳ ಮಂಡಳಿ
ದೇಶದಲ್ಲಿ ಔಷಧಿ ಗಿಡಗಳ ಬೆಳವಣಿಗೆಗೆ ಹಮ್ಮಿಕೊಂಡಿರುವ ಯೋಜನೆಗಳು ಜಾರಿಗೆ ತರುವುದು ಹಾಗೂ ಮೇಲ್ವಿಚಾರಣೆ ಮಾಡುವುದು.

10. ರಾಷ್ಟ್ರೀಯ ತೋಟಕಾರಿಕಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ
ತರಕಾರಿಗಳ ಹಾಗೂ ತರಕಾರಿಗಳ ಬೀಜದ ಅಭಿವೃದ್ಧಿಗಾಗಿ ಕೈಗೊಂಡಿರುವ ಯೋಜನೆಗಳ ಮೇಲ್ವಿಚಾರಣೆ ಮಾಡುವುದು.
ಮಹಿಂದರ್ ಸಿಂಗ್
ಉಪ ಮಹಾ ನಿರ್ದೇಶಕ
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ , ಬೆಂಗಳೂರು
ಫೋ ;